Wednesday, December 2, 2009

ನೀ ಬಾರೋ ರವಿತೇಜ

ಮುಸುಕೆಳೆದು ಕಗ್ಗತ್ತಲೆಯ ಸರಿಸಿ
ನೀ ಬಾರೋ ರವಿತೇಜ
ಗಿಡ ಮರದ ಎಲೆಗಂಟಿ
ಸವಿ ಕನಸು ಕಾನುತಿರುವ
ಎಳೆ ಇಬ್ಬನಿಗೆ ಹೊಳಪು ನೀಡಲು,
ಕರಿಮೋಡದ ತೆರೆಯ ಸರಿಸಿ,
ದಿನ ಹುಟ್ಟನ್ನು ಸೂಚಿಸುತ್ತ,
ಮೂಡಣದೀ ನೀ ಹುಟ್ಟಿ ಬಾರೋ ರವಿಯೇ,
ನಿನ್ನ ರಶ್ಮಿಯನ್ನು ಜಗದ್ದುದಕ್ಕೂ ಹರಡುತ್ತಾ,
ಮನು, ಪ್ರಾಣಿ ಸಂಕುಲಕ್ಕೆ
ನಿತ್ಯದ ಕರ್ತವ್ಯದ ಅರಿವು ಮೂಡಿಸಲು,
ಮನುವಿನ ಮನವ ಕಾಡುವ
ಯಾಂತ್ರಿಕತೆಯ ದಿಗಿಲು ಹೊಡಿಸಿ,
ದಿನದ ಹುಟ್ಟು, ಸಾವಿನಂತೆ
ಮನುವಿನಲ್ಲೂ ಹೊಸತನ, ಹೊಸ ಕನಸು,
ಆಸಯಗಳ ಬಲೆ ಎಣೆಯ ಬಾರೋ ರವಿತೇಜ.

Wednesday, April 29, 2009

ಮನದ ಮುಗಿಲು

ಮನದ ಮುಗಿಲಿನಲ್ಲಿ ಮೋಡ ಕಟ್ಟಿದೆ,
ಮೋಡ ಮೋಡ ತಾಕಿ ಧರೆಗೆ ಹನಿ ಉರುಳುವ
ಮುನ್ನ ಬೀಸಿದ ಬಿರುಗಾಳಿಗೆ ಮೋಡ ಚದುರಿದೆ

ಹನಿ ನೀರಿಂದ ತಂಪಾಗಲು ಕಾತರಿಸಿದ್ದ
ನೆಲಕ್ಕಿನ್ನು ಕಾಯುವ ಕಾಯಕ ಮುಗಿದಿಲ್ಲ,
ಒಣಗಿದ ತುಟಿಗಳಿಗೆ ನಿರೀಕ್ಷೆ ಅಷ್ಟೆ!

ಮನದ ನೆಲವಿನ್ನು ಬರಡು ಬರಡು,
ಭಾವವೆಂಬ ಸಸಿಗಳು ಮರುಟಿ ಹೋಗಿದ್ದು, ಮತ್ತೆಂದು
ಕಟ್ಟುವುದು ಮೋಡ, ಮನದ ಮುಗಿಲ ತಣಿಸಲು

Friday, March 13, 2009

ಹೇಳಲಾಗದ ಆ ಮಾತುಗಳು

ಮನೆಯ ನಾಲ್ಕು ಗೋಡೆಗಳ ಮದ್ಯೆ ಕುಳಿತು
ಯೋಚಿಸುತಿರುವೆ ನಾನು ಅದನ್ನೇ!

ಏಕೆ ಹೊರ ಬರಲಿಲ್ಲ, ಈ ತನಕ
ಹೇಳಲಾಗದ ಆ ಮಾತುಗಳು

ಹಸಿ ಹಸಿ ಆಗುತಿವೆ, ಮನಸಿನ
ಆ ಎಲ್ಲಾ ಮಾತುಗಳು

ನಗು, ಹಾಸ್ಯ ಮತ್ತು ವಿಷಾದ,
ಅದೆಷ್ಟೋ ಪ್ರೀತಿಯ ನೆನಪಿನ ಕಾಣಿಕೆಗಳು

ನೀ ಒಂಟಿ ಸಿಕ್ಕಾಗೆಲ್ಲಾ
ನಟಿಸಿದೆ ನಾ ನಿನ್ನೊಡನೆ!

ಹೇಳಲು ಅವಕಾಶ ಇದೆ ಈಗ
ಆದರೆ ನೀ ನನ್ನ ಕೈ ಬಿಟ್ಟಿರುವೆ

ಪುನಃ ಉಳಿದಿವೆ ಆ ಎಲ್ಲಾ
ಮಾತುಗಳು ಹೇಳಲಾಗದಂತೆ !

ಎಲ್ಲಾ ಕನಸು, ಆಶಯಗಳು
ಅಪೂರ್ಣ, ಅಪೂರ್ಣವಾಗಿ ಉಳಿದಿವೆ

ನಾ ನನ್ನ ಮನಸಿಗೆ ತಿಳಿ ಹೇಳಿದೆ
ಏಕೆ ಹಾಳು ಮಾಡಿಕೊಳುವೆ ಜೀವನವ?

ಅಳಿದು ಹೋಗುವ ನಾಲ್ಕು ದಿನದ ಜೀವನದಲ್ಲಿ
ಪ್ರಿತಿಗಾಗಿ ಏಕೆ ನೀ ಹಂಬಲಿಸುವೆ ಪದೇ ಪದೇ

ತಿಂಗಳು, ವರ್ಷಗಳು ಸರಿದು ಹೋದವು
ಹೇಳದ ಮಾತುಗಳು ಈಗ ನೆನಪಾಗಿವೆ

ಆದರೆ ಹೇಳಲಾಗದ ಆ ಮಾತುಗಳಿಂದ
ಮನಸಿನಲಿದೇ ಮಾಸದ ಅತೀವ ನೋವು

ಈಗ ಅರಿವಾಗಿದೆ ಎಂದಿಗೂ
ನಾ ಪಡೆಯಲಾರೆ ನೆಮ್ಮದಿ

ಆದರೆ ಹೇಗೆ ಹೇಳಲಿ ನಾನೀಗ
ನಿನಗೆ ಹೇಳಲಾಗದ ಮಾತುಗಳ!

ಹೋದೆ ನೀ ಹೋದೆ ದೂರ
ಬಹು ದೂರ ಮರಳಿ ಬಾರದೆಡೆಗೆ!

Tuesday, March 3, 2009

ಫಲವೇನು.........?

ಒಳ ಮನಸಿನ ಕುಸಿದ ಗೋಡೆಗಳು
ಆ ಗೋಡೆಯಲ್ಲಿ ಕಟ್ಟಿರುವ ಜೇಡ
ಎಲ್ಲ ತೆಗೆದಿರುವೆ ಗೆಳೆಯ ಆದರೆ ಫಲವೇನು...........?

ನೀ ಎಂದಿಗೂ ಅರಿಯದಾದೆ ಮನದ ಗೋಡೆಗಳ
ನೈಜತೆ, ಮನದಂಗಳದ ಕಂದರ, ಗೋಡೆ
ಆಸರಿಸಿದ ಜೇಡನ ತೀವ್ರತೆ !!!

ಕುಸಿದ ಮನೆಯ ಗೋಡೆಯ ಗೊಡ ವು
ನಿನಗಿಲ್ಲ ಎಂಬ ಪರಿವಿದೆ ಆದರೂ
ನಿನ್ನ ಬರುವಿಗಾಗಿ ಕಾದಿರುವೆ

ಹಾಳು ಮನದ ಮನೆಯ ಪಂಜರದಿಂದ
ಮುಕ್ತಗೊಂಡ ಹಕ್ಕಿ ನೀನು, ರೆಕ್ಕೆ ಮುರಿದ
ಹಕ್ಕಿ ನಾನು................?

ದೂರ ದಿಗಂತದೆಡೆಗೆ ಹಾರುವಾಸೆ ನಿನ್ನದು
ರೆಕ್ಕೆ ಮುರಿದ ಹಕ್ಕಿ ನಾನು, ಭಾವ ಶೂನ್ಯ
ಬದುಕೀಗ ನನ್ನದು