Tuesday, March 3, 2009

ಫಲವೇನು.........?

ಒಳ ಮನಸಿನ ಕುಸಿದ ಗೋಡೆಗಳು
ಆ ಗೋಡೆಯಲ್ಲಿ ಕಟ್ಟಿರುವ ಜೇಡ
ಎಲ್ಲ ತೆಗೆದಿರುವೆ ಗೆಳೆಯ ಆದರೆ ಫಲವೇನು...........?

ನೀ ಎಂದಿಗೂ ಅರಿಯದಾದೆ ಮನದ ಗೋಡೆಗಳ
ನೈಜತೆ, ಮನದಂಗಳದ ಕಂದರ, ಗೋಡೆ
ಆಸರಿಸಿದ ಜೇಡನ ತೀವ್ರತೆ !!!

ಕುಸಿದ ಮನೆಯ ಗೋಡೆಯ ಗೊಡ ವು
ನಿನಗಿಲ್ಲ ಎಂಬ ಪರಿವಿದೆ ಆದರೂ
ನಿನ್ನ ಬರುವಿಗಾಗಿ ಕಾದಿರುವೆ

ಹಾಳು ಮನದ ಮನೆಯ ಪಂಜರದಿಂದ
ಮುಕ್ತಗೊಂಡ ಹಕ್ಕಿ ನೀನು, ರೆಕ್ಕೆ ಮುರಿದ
ಹಕ್ಕಿ ನಾನು................?

ದೂರ ದಿಗಂತದೆಡೆಗೆ ಹಾರುವಾಸೆ ನಿನ್ನದು
ರೆಕ್ಕೆ ಮುರಿದ ಹಕ್ಕಿ ನಾನು, ಭಾವ ಶೂನ್ಯ
ಬದುಕೀಗ ನನ್ನದು

2 comments:

  1. tumba chennaagide.....
    gud luck

    ReplyDelete
  2. ಹೆಣ್ಣಿನ ಒಳತೋಟಿ ಕವನದಲ್ಲಿ ಚೆನ್ನಾಗಿ ಅಭಿವ್ಯಕ್ತವಾಗಿದೆ.ಪ್ರೇಮ ಭಗ್ನಗೊಂಡಿರುವು ದನ್ನು ಕುಸಿದ ಗೋಡೆ ಸಂಕೇತಿಸುತ್ತದೆ.ಹಲವು ಕನಸುಗಳನ್ನು ಹೊತ್ತ ಹಕ್ಕಿ ರೆಕ್ಕೆ ಮುರಿದುಕೊಂಡಿರುವುದು ಮುಂದೆ ದಾರಿಯೇ ಕಾಣದ ಆಕೆಯ ಸ್ಥಿತಿಯನ್ನು ಬಿಂಬಿಸುತ್ತದೆ. ಹೀಗಾಗಿ ಕವನ ಚೆನ್ನಾಗಿ ಮೂಡಿ ಬಂದಿದೆ.

    ReplyDelete