Thursday, March 11, 2010

ಮುಖವಾಡಗಳು

ಇದು ಮುಖವಾಡಗಳ ಮಾರುಕಟ್ಟೆ
ದೂರ ದೂರದ ವರಗೂ ಹರಡಿವೆ!

ಬಗೆ ಬಗೆಯ ಬಣ್ಣದ, ಬಗೆ ಬಗೆಯ
ಆಕಾರದ ಮುಖವಾಡಗಳು!

ಖರೀದಿ ಮಾಡುವರಿಗಿಲ್ಲ ಬರ,
ಎಲ್ಲರೂ ಅವರವರಿಗೆ ತಕ್ಕಂತೆ!

ಮುಖವಾಡಗಳ ಹೆಕ್ಕುವವರೇ ಎಲ್ಲ
ಕಡಿಮೆ ಏನಿಲ್ಲ ಕೊಳ್ಳುಗರಿಗೆ!

ಒಮ್ಮೆ ಭ್ರಷ್ಟತೆ, ಅನೀತಿ, ಜಾತಿಯತೆಯ
ಧರ್ಮಾತಿತೆಯ ಮುಖವಾದ ತೊಟ್ಟರೆ!

ಮತ್ತೊಮ್ಮೆ ಮಗದೊಮ್ಮೆ ಬೇಕಾಗುತ್ತೆ
ನೈತಿಕತೆ, ತಾತ್ವಿಕತೆಯ ಮುಖವಾಡಗಳು!

ಒಬ್ಬರಿನ್ನೊಬ್ಬರು ಕಮ್ಮಿಯೇನಿಲ್ಲ ಎಲ್ಲರೂ
ಮುಖವಾಡಗಳ ಪ್ರಿಯರೇ !

ತನ್ನೊಳಗಿನ ಉಳುಕ ಮರೆ ಮಾಚಲು
ಅಗತ್ಯವೀ ಮುಖವಾಡಗಳು!

ಒಮ್ಮೆ ಪ್ರೀತಿಯ ಮುಖವಾಡ ತೊಟ್ಟರೆ ಇನ್ನೊಮ್ಮೆ
ದ್ವೇಷ ಅಸೂಯೆಯ ವಿಕಾರ ಮುಖವಾಡ!

ಅಗತ್ಯವೇ! ಮುಖವಾಡಗಳ ಮೊರೆ
ಹೋಗುವಿಕೆ...................?

ಇದು ಮುಖವಾಡಗಳ ಕಾಲ
ತೆಗೆದಷ್ಟು, ಒಗೆದಷ್ಟು ಮುಖವಾಡಗಳು!

ಒಂದರ ಹಿಂದೆ ಮತ್ತೊಂದು ಮುಖವಾಡ
ನೈಜ ಮುಖ ಹುಡುಕಬೇಕಷ್ಟೆ!

Friday, February 26, 2010

गलत मेरी नहीं...........

तुम ने दिखाया सगार को

लेकिन मैंने देखा

उस में छुपे मोती!

तुम ने दिखाया आकाश

लेकिन मैंने चाहा

सात रंगों के इन्द्रधनुष!

तुम ने दिया लाल गुलाब

लेकिन मुझे चाहिए था कि
मेहेकते हुई जाजी फूल!


क्या कुछ नहीं पाया में! क्या
कुछ कमी तो नहीं, लेकिन
जिसे चाहती थी हो नहीं मिला!

गलती तो मेरी नहीं थी पिया!
यह मेरी पागल सी मन कि थी!

जिसे सूरज देखा ! उसे कवी देखा!

जो दिखा, जो न दिखा सब चाहते

नींद खाई ही हूँ में!

तेरे..............

जब तन जल रहा था! तब
पता ही नहीं चला कि
मन भी जल चूका था!
तुम्हे डरने कि जरूरत नहीं है!
क्योंकि तुम उधर थे ही नहीं!

ಮುದ್ದು ಪೆದ್ದು

ನನ್ನ ನಿದ್ದೆಯನ್ನೆಲ್ಲ ನೀ ಕದ್ದು,
ಈಗ ಮಲಗೆನ್ನುತಿರುವೆ
ಮಾಡದೆ ಸದ್ದು!

ನಿನಗೆ ನೀಡಲಾರದೆ ಮುದ್ದು,
ನಾ ಹೇಗೆ ಮಲಗಲೋ
ಪೆದ್ದು! ಪೆದ್ದು!

ಕತ್ತಲು ಬೆತ್ತಲು

ಸುತ್ತ ಮುತ್ತಕ್ಕು ಕಡುಗತ್ತಲು,
ಬೆಳಕ ಕಿಂಡಿ ಕಾಣದಿರಲು ದಿಗಿಲು,
ಅವನ ನೆಪಗಳ ನೆನಪುಗಳ ಮಧ್ಯೆ
ನಾ ಕಳೆದು ಹೋಗಲು,ಅವ ಬಿಟ್ಟ
ಈ ಮನ ಕತ್ತಲಲ್ಲಿ ಬೆತ್ತಲು

ನನ್ನವನು

ಹೃದಯದೊಳಗೆ ಅವಿತ ನಿನ್ನ,
ಊರೆಲ್ಲ ಹುಡುಕಿ, ನೀ ಕಾಣದಾಗ,
ಡವಗುಡುವ ಎದೆಯನ್ನೊಮ್ಮೆ
ಮುಟ್ಟಿ ನೋಡಿದರೆ, ನೀ ಕಿಲ್ಲನೆ
ನಗೆ ನಕ್ಕು ನನ್ನ ತಲೆ ಮೊಟಕಿದೆ!

ग़जल

बारिश को बस रोना आता है!
हँसाना नहीं,
सूरज को बस जलना आता है!
बुझाना नहीं,
मुझे बस याद करना आता है!
भुलाना नहीं

Monday, February 15, 2010

ಕನಸುಗಳಿಗೀಗ ಹಾರುವ ಕಾಲ!

ಹೃದಯದ ಮೆದುವಿನಲ್ಲಿ ಬಹುಕಾಲ
ಬೆಚ್ಚಗೆ ಬಚ್ಚಿಟ್ಟು ಕೊಂಡಿದ್ದ
ಕನಸುಗಳಿಗೀಗ ರೆಕ್ಕೆ ಬಂದಿದೆ!

ಕನ್ಮನದಲ್ಲೇ ನೆಲೆ ಕಾಣ ಹೊರಟಿದ್ದ
ಕನಸುಗಳಿಗೀಗ ಅಂಕೆ ಮೀರಿ ಮೇರು
ಗಗನವ ಚುಂಬಿಸುವ ತವಕ!

ಹೃದಯದ ಮೆದುವಿನ್ನು ಖಾಲಿ
ಖಾಲಿ, ಗರಿಗೆದರಿ ಹೊರಟಿರುವ
ಕನಸುಗಳು ಮರಳಿ ಬರುವವೇ ಮತ್ತೆ!

ಕನಸುಗಳಿಗೂ ಕನಸು ಕಾಣುವ
ಕಾಲವಿದು, ಕನಸುಗಳಿಗೆ ಇಂದು
ನೆನಸಾಗುವ ಕನಸಿನ ಕನವರಿಕೆ!

Thursday, February 11, 2010

ಮೊದಲ ಪಾಪ

ಅದೋ ಅಲ್ಲಿ ಹರಡಿವೆಯಲ್ಲ..........?
ಅವು ಮೊನ್ನೆ ನಾವೇ ತುಂಡರಿಸಿದ
ಹೆಮ್ಮರದ ಬಿಳಲುಗಳು........!

ಏನಾಶ್ಚರ್ಯ ಬಿದ್ದ ಬಿಳಲುಗಳು
ಅಲ್ಲಲ್ಲಿ ನೆಲಕಚ್ಚಿ ಚಿಗುರೊಡೆಯ
ತೊಡಗಿವೆಯಲ್ಲ...............!

ಕಾಲ ಚಕ್ರದ ಅಡಿಯಲ್ಲಿ ಸಿಕ್ಕಿ
ಮಡಿದ ಹೆಮ್ಮರಗಳ ಸಂಖ್ಯೆ
ಅದೆಷ್ಟೋ ಬಲ್ಲವರಾರು ?

ಋತು ಆಗಮನದ ಸಿಂಚನ
ಸಮ್ಮಿಲನದ ಫಲವಾಗಿ ಮತ್ತೆ
ಚಿಗುರೊಡೆಯುವ ಸಸಿಗಳೆಷ್ಟೋ ?

ಮಾವು, ಹಲಸು, ಹೊಂಗೆ ತೆಂಗು
ಬೇವು ಬೇಲಾ ಹೀಗೆ ಹಲವು
ಬಗೆಯ ಜಾತಿ .................

ಇದು ಮೊದಲ ಪಾಪದ ಫಲ
ಬೀಜ ವೃಕ್ಷದ ನೀತಿ ಬಲ್ಲವರು
ಯಾರು ಇಲ್ಲಿ ...............?