Thursday, February 11, 2010

ಮೊದಲ ಪಾಪ

ಅದೋ ಅಲ್ಲಿ ಹರಡಿವೆಯಲ್ಲ..........?
ಅವು ಮೊನ್ನೆ ನಾವೇ ತುಂಡರಿಸಿದ
ಹೆಮ್ಮರದ ಬಿಳಲುಗಳು........!

ಏನಾಶ್ಚರ್ಯ ಬಿದ್ದ ಬಿಳಲುಗಳು
ಅಲ್ಲಲ್ಲಿ ನೆಲಕಚ್ಚಿ ಚಿಗುರೊಡೆಯ
ತೊಡಗಿವೆಯಲ್ಲ...............!

ಕಾಲ ಚಕ್ರದ ಅಡಿಯಲ್ಲಿ ಸಿಕ್ಕಿ
ಮಡಿದ ಹೆಮ್ಮರಗಳ ಸಂಖ್ಯೆ
ಅದೆಷ್ಟೋ ಬಲ್ಲವರಾರು ?

ಋತು ಆಗಮನದ ಸಿಂಚನ
ಸಮ್ಮಿಲನದ ಫಲವಾಗಿ ಮತ್ತೆ
ಚಿಗುರೊಡೆಯುವ ಸಸಿಗಳೆಷ್ಟೋ ?

ಮಾವು, ಹಲಸು, ಹೊಂಗೆ ತೆಂಗು
ಬೇವು ಬೇಲಾ ಹೀಗೆ ಹಲವು
ಬಗೆಯ ಜಾತಿ .................

ಇದು ಮೊದಲ ಪಾಪದ ಫಲ
ಬೀಜ ವೃಕ್ಷದ ನೀತಿ ಬಲ್ಲವರು
ಯಾರು ಇಲ್ಲಿ ...............?

No comments:

Post a Comment